ಬೆಂಬಲಿಗರು

ಮಂಗಳವಾರ, ಮೇ 28, 2013

ನಮ್ಮ ಊರಿನ ಹೆಮ್ಮೆಯ ಸಂಗೀತ ನಕ್ಷತ್ರ - ರಂಜನಿ ಗುರುಪ್ರಸಾದ್

                                                       
 



ಕರ್ನಾಟಕ ಸಂಗೀತ ಕ್ಷೇತ್ರ ದ  ಯುವ ತಲೆ ಮರೆಯ  ಅಗ್ರ ಗಣ್ಯ  ಹಾಡು ಗಾರ್ತಿ  ರಂಜನಿ ಗುರುಪ್ರಸಾದ್ .ತಂದೆ ಅರವಿಂದ


ಹೆಬ್ಬಾರ್ ,ಉಡುಪಿ  ಎಂ ಜಿ ಎಂ ಕಾಲೇಜ್ ನಲ್ಲಿ  ಪ್ರಾಧ್ಯಾಪಕ ರಾಗಿದ್ದವ ರು ಮತ್ತು ತಾಯಿ  ಶ್ರೀಮತಿ ಅನ೦ತ


ಲಕ್ಷ್ಮಿ .ಇಬ್ಬರೂ  ಸಂಗೀತ ದಲ್ಲಿ  ಪರಿಶ್ರಮ  ಇದ್ದವರು .ಆರಂಭದ ಗುರುಗಳೂ ಅವರೇ. ನಂತರ  ವಿದ್ವಾನ್  ಮಧೂರು


ಶ್ರೀ ಬಾಲಸುಬ್ರಹ್ಮಣ್ಯಂ ಅವರಲ್ಲಿ ತರಬೇತಿ. ಖ್ಯಾತ  ಗಾಯಕಿ ಶ್ರೀಮತಿ ಸೌಮ್ಯ  ಅವರ  ಮುಂದಿನ  ಮಾರ್ಗದರ್ಶಿ .


ಕರ್ನಾಟಕ  ಸಂಗೀತ ದ  ಮೇರು  ಶ್ರೀ ಚೆಂಗಲ್ ಪೆಟ್  ರಾಮನಾಥನ್  ಅವರಲ್ಲ್ಲೂ ಶಿಷ್ಯ ವೃತ್ತಿ.


ಸಣ್ಣ ವಯಸ್ಸಿನಲ್ಲಿ  ಇಷ್ಟೆಲ್ಲಾಲ್ಲಾ ಸಾಧನೆ  ಸುಮ್ಮನೆ ಆಗಲಿಲ್ಲ.  ಅದಕ್ಕಾಗಿ ಚೆನೈ ನಲ್ಲಿ  ಹಾಸ್ಟಲ್ ವಾಸ, ಸಾಮಾನ್ಯ 


ವಿದ್ಯಾಭ್ಯಾಸ ಅಲ್ಲಿಯೇ ಮುಂದುವರಿಕೆ . ಮದ್ರಾಸ್ ವಿಶ್ವ ವಿದ್ಯಾಲಯದಿಂದ  ಎಂ ಮ್ಯುಸಿಕ್  ಪದವಿ.


ಚೆನ್ನೈ ನ  ಪ್ರಮುಖ ಸಭಾಗಳಲ್ಲಿ  ಮನ್ನಣೆ.ಆಕಾಶವಾಣಿ ಮತ್ತು ದೂರದರ್ಶನ್  ಎ ಗ್ರೇಡ್ ಕಲಾವಿದೆ .

ಇ೦ಜಿನಿಯರ್ ಗುರುಪ್ರಸಾದ್  (ಸುಳ್ಯ ಪದವಿನರು) ಪತಿ.  ಇವರ ಪ್ರತಿಭೆಗೆ ತುಂಬು ಪ್ರೋತ್ಸಾಹ .ಇವರ

ಹಾಡುಗಾರಿಕೆಯ  ಒಂದು ತುಣುಕು ನೋಡಿರಿ.(ಅಪ್ ಲೋಡರ್ಗೆ ವಂದಿಸುತ)



https://www.youtube.com/watch?v=cQpm547iqpM

ಸೋಮವಾರ, ಮೇ 27, 2013

ಮರೆಯಲಾಗದ ಮಹನೀಯರು -ಕುದ್ಮುಲ್ ರಂಗ ರಾಯರು


                                                                       ೧೮೫೯-೧೯೨೦

ಮಂಗಳೂರಿನಲ್ಲಿ  ಬಂಟ್ಸ್ ಹಾಸ್ಟಲ್ ನಿಂದ  ಪಿ ವಿ ಎಸ  ಸರ್ಕಲ್ ಗೆ  ಹೋಗುವ ರಸ್ತೆಗೆ  ಕುದ್ಮುಲ್ ರಂಗ ರಾವ್  ರಸ್ತೆ  ಎಂದು ಹೆಸರು. ಈ ರೋಡಿನಲ್ಲಿ  ಇವರ ಹೆಸರಿನ ಹಿಂದುಳಿದ ವರ್ಗದವರ  ವಿದ್ಯಾರ್ಥಿ ನಿಲಯ ಇದೆ . ಇವರು

ಸಾರಸ್ವತ ಬ್ರಾಹ್ಮಣ ರು. ವಕೀಲ ವೃತ್ತಿ. ೧೯ನೆ  ಶತಮಾನದಲ್ಲಿ  ಅಸ್ಪೃಶ್ಯತೆ ಯ ವಿರುದ್ದ  ಹೋರಾಟ ನಡೆಸಿದವರು .ಆ ಕಾಲದಲ್ಲಿ ಇವರಿಗೆ  ಭಾರೀ ಪ್ರತಿರೋಧ ಇತ್ತು.   ಡಿಪ್ರೆಸ್ಡ್ ಕ್ಲಾಸ್ ಸೊಸೈಟಿ  ಆರಂಬಿಸಿ  ,ಹಿಂದುಳಿದವರಿಗೆ  ಸೇಡಿಗುಡ್ಡೆಯಲ್ಲಿ

ಶಾಲೆ  ಆರಂಬಿಸಿದರು . ಬಹುಶ  ಅಲ್ಲೇ ಇರುವುದು  ಈಗಿನ   ಹಾಸ್ಟಲ್.ಇವರ  ಕಾರ್ಯಕ್ಕೆ ಕ್ರಮೇಣ  ಒತ್ತಾಸೆಯಾದವರು  ಕಾರ್ನಾಡ್ ಸದಾಶಿವ ರಾಯರು.


೨೪.೨.೧೯೩೫ ರಲ್ಲಿ  ಮಹಾತ್ಮಾ ಗಾಂಧಿಯವರು  ಮಂಗಳೂರಿಗೆ ಬೇಟಿಯಿತ್ತಾಗ  ಹೇಳಿದ ಮಾತು ,'ಹಿಂದುಳಿದವರನ್ನು ಮೇಲೆತ್ತುವ  ಮತ್ತು ಅಸ್ಪೃಶ್ಯತಾ ನಿರ್ಮೂಲನೆಯ ನನ್ನ  ಪ್ರಯತ್ನಗಳಿಗೆ  ಕುದ್ಮುಲ್ ರಂಗ ರಾಯರು  ಮಾರ್ಗ ದರ್ಶಿ
ಮತ್ತು  ಸ್ಪೂರ್ತಿ'


ಕುದ್ಮುಲ್ ಅವರು ಸ್ತ್ರೀ ಶಿಕ್ಷಣ ಕ್ಕೂ  ಪ್ರೋತ್ಸಾಹ ನೀಡಿದರು.ಇವರ ಮಗಳು  ರಾಧಾಭಾಯ್ ಕುದ್ಮುಲ್  ಮದ್ರಾಸಿನ ಮಾಜಿ ಮುಖ್ಯ ಮಂತ್ರಿ ಶ್ರೀ  ಸುಬ್ಬರಾಯನ್ ಅವರನ್ನು ವಿವಾಹ  ಆದರು (ಅಂತರ್ಜಾತಿ). ಇವರ ಮಕ್ಕಳೇ  ಪ್ರಸಿದ್ದ ರಾದ  ಕುಮಾರಮಂಗಲಂ  ಸಹೋದರರು .ಒಬ್ಬರು ಸಶಸ್ತ್ರ ಪಡೆ ಯ  ಮಹಾ ದಂಡ ನಾಯಕ ನಾದರೆ ,ಇನ್ನೊಬ್ಬರು  ರಾಜಕಾರಿಣಿ ಯಾಗಿ  ಕೇಂದ್ರ ಸಚಿವರಾದರು.
ಮಗಳು  ಪಾರ್ವತೀ ಕೃಷ್ಣನ್  ಸಂಸತ್ ಸದಸ್ಯರಾಗಿದ್ದರು .ಮೊಮ್ಮಗ  ರಂಗ ರಾಜ ಕುಮಾರ ಮಂಗಳಂ  ನರಸಿಂಹ ರಾವ್ ಮತ್ತು ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದರು. ರಂಗ ರಾಜಮ್ ಗೆ ಪ್ರತಿಜ್ಞಾ ವಿಧಿ ಬೋಧಿಸಿದ ರಾಷ್ಟ್ರಪತಿ  ಆರ್
ವೆಂಕಟರಾಮನ್  ನಿಮ್ಮ ಮೂರು ತಲೆ ಮಾರಿನವರೊಡನೆ ಕೆಲಸ ಮಾಡಿದ ಅನುಭವಿ ನಾನು ಎಂದು  ಹೇಳಿದರು .

ಮರೆಯಲಾಗದ ಮಹನೀಯರು -ಕಾರ್ನಾಡ್ ಸದಾಶಿವ ರಾವ್

                                             

1881-1937

ಮಂಗಳೂರಿನಲ್ಲಿ  ಕೆ ಎಸ ರಾವ್ ರೋಡ್ ಎಂದರೆ  ಬೆಂಗಳೂರಿನ  ಕೆಂಪೇಗೌಡ ರಸ್ತೆಯಂತೆ .ಹಂಪನಕಟ್ಟೆಯಿಂದ 

ಕೊಡಿಯಾಲ್ ಬೈಲಿಗೆ  ಹೋಗುವ ಮುಖ್ಯ ರಸ್ತೆ . ಸ್ವಾತಂತ್ರ್ಯ ಹೋರಾಟ ಗಾರ  ತ್ಯಾಗ ವೀರ  ಕಾರ್ನಾಡ ಸದಾಶಿವ 

ರಾವ್ ಅವರ ಹೆಸರು ಈ ರಸ್ತೆಗೆ ಇಡಲಾಗಿದೆ .ಬೆಂಗಳೂರಿನಲ್ಲಿಯೂ ಸದಾಶಿವ ಬಡಾವಣೆ ಗೆ ಇವರ ಹೆಸರು .

ಕೆ ಎಸ ರಾವ್ ರಸ್ತೆರ ಕೇಂದ್ರ ಸಹಕಾರಿ ಬ್ಯಾಂಕ್ ಇರುವ ಜಾಗದಲ್ಲಿ ಅವರ ಮನೆ ಇತ್ತು.

ಹುಟ್ಟು ಶ್ರೀಮಂತ ರಾಗಿದ್ದ ಇವರು ಪ್ರಸಿದ್ದ್ದ ವಕೀಲ ರಾಗಿದ್ದರು .ಸ್ವಾತಂತ್ರ್ಯ ಹೋರಾಟ ದಲ್ಲಿ ಭಾಗವಹಿಸುವ 

ಸಲುವಾಗಿ  ವೃತ್ತಿ ಬಿಟ್ಟು ಪೂರ್ಣ ಕಾಲ ದೇಶ ಸೇವೆಗೆ ತೊಡಗಿಸಿ ಕೊಂಡರು. ಮಹಾತ್ಮಾ ಗಾಂಧಿ 

ಅವರಿಗೆ  ಆಪ್ತ ರಾಗಿದ್ದರು .ದಿಪ್ರ್ರೆಸ್ದ್ ಕ್ಲಾಸ್ ಸೊಸೈಟಿ ,ತಿಲಕ್ ವಿದ್ಯಾಲಯ ಇವರು ನಡೆಸಿ ಕೊಂಡು ಬಂದ 

ಸಂಸ್ತೆಗಳು .ಅಸ್ಪ್ರುಶ್ಯತೆ ವಿರುದ್ಧ ಕುದ್ಮಲ್ ರಂಗರಾಯರು ಆರಂಭಿಸಿದ ಹೋರಾಟ ಮುಂದುವರಿಸಿದರು.


ಇವರು ದೇಶ ಸೇವೆ ಗಾಗಿ ಮಾಡಿದ ಸಾಲಕ್ಕೆ ಇವರ ಮನೆಯನ್ನು ಇವರ ಅನುಪಸ್ತಿತಿಯಲ್ಲಿ  ಹರಾಜು ಹಾಕಲಾಯಿತು.


ಹೋರಾಟ ಕಾರಣಕ್ಕೆ ಕಡಲೂರು ಜೈಲಿನಲ್ಲಿ  ಶಿಕ್ಷೆ  ಅನುಭವಿಸಿದರು.

ಈ ನಡುವೆ ಅವರ ಪತ್ನಿ ಹಾಗು ಇದ್ದ ಓರ್ವ ಮಗ ಅನಾರೋಗ್ಯದಿಂದ ಸಾವನ್ನಪ್ಪಿದರು .

ಕರ್ನಾಟಕ  ಕೊಂಗ್ರೆಸ್ಸ್ ನ ಅಧ್ಯಕ್ಷರಾಗಿ ರಾಜ್ಯದಾದ್ಯಂತ ಸಂಚರಿಸಿ ಸಂಘಟನೆ ಮಾಡಿದರು .

೧೯೩೫ ರಲ್ಲಿ ಫೆಡರಲ್ ಆಕ್ಟ್ ನಂತೆ ಪ್ರಾಂತೀಯ ವಿಧಾನ ಸಭೆಗಳಿಗೆ  ಚುನಾವಣೆ ನಡೆಯಿತು .ಕೈಯ್ಯಲ್ಲಿ 

ಏನೂ ಹಣವಿಲ್ಲದ ಸದಾಶಿವ ರಾಯರಿಗೆ ಟಿಕೆಟ್ ನಿರಾಕರಿಸಲಾಯಿತು.

ಶಿವರಾಮ ಕಾರಂತರ  ಮಾತುಗಳಲ್ಲಿ ಕೇಳಿ .' ಇಂಥ ನೋವುಗಳ ಜೊತೆಗೆ ಅವರೇ ದುಡಿದು ಬೆಳೆಸಿದ ಮಂಗಳೂರು 

ಜಿಲ್ಲಾ ಕೊಂಗ್ರೆಸ್ನಲ್ಲಿ  ಧೂಮಕೆತುವಿನಂತೆ ಕಾಲಿರಿಸಿದ ಪುಢಾರಿ ಗಳೊಬ್ಬರು  -ಹೆಸರು ಹೇಳಿದರೂ ಭಾಧಕವಿಲ್ಲ ,ಶ್ರೀನಿವಾಸ

 ಮಲ್ಯ ರಂತವರು ಶ್ರೀ ಕಾರ್ನಾಡರ ಸ್ಥಾನವನ್ನು ಇಳಿಸಲು ಯತ್ನಿಸಿದ್ದನ್ನು ಬಲ್ಲೆ.'

ಚಿನ್ನದ ಚಮಚೆ  ಬಾಯಲ್ಲಿಟ್ಟು ಹುಟ್ಟಿ ,ದೇಶಕ್ಕಾಗಿ ಎಲ್ಲವನ್ನೂ ಕಳೆದು ಕೊಂಡು ದೈನ್ಯಾವಸ್ತೆ ಯಲ್ಲಿ ಕೊನೆಯ 

ದಿನಗಳನ್ನು ಕಳೆದ ಇಂತಹ ಮಹನೀಯರನ್ನು ಮರೆಯ ಬಾರದು.

ಬುಧವಾರ, ಮೇ 22, 2013

ಸಕ್ಕರೆ ಕಾಯಿಲೆ ಮತ್ತು ಗ್ಲೈಕೊಸಿಲೇಟೆಡ್ ಹಿಮೊಗ್ಲೋಬಿನ್ (HbA1c)

 ಇತ್ತೀಚಿಗೆ  ಸಕ್ಕರೆ ಕಾಯಿಲೆಗೆ  HBA1c ಎಂಬ ರಕ್ತ ಪರೀಕ್ಷೆ ಮಾಡುವುದನ್ನು ನೀವು ಗಮನಿಸಿರ ಬಹುದು. ಇದೇನು?


Hb ಎಂದರೆ ಕೆಂಪು ರಕ್ತ ಕಣದಲ್ಲಿ ಇರುವ ಆಮ್ಲಜನಕ ವಾಹಕ ಅಂಶ .ಇದು ಕಬ್ಬಿಣ ಹಾಗೂ ಸಸಾರ ಜನಕ ಗಳಿಂದ 


ಮಾಡಲ್ಪಟ್ಟಿದೆ.ಕೆಂಪು ರಕ್ತ  ಕಣದ ಸರಾಸರಿ ಆಯುಸ್ಸು ೧೨೦ ದಿನಗಳು. ರಕ್ತದಲ್ಲಿ  ಗ್ಲುಕೋಸ್ (ಸಕ್ಕರೆ) ಹಿಮೊಗ್ಲೋಬಿನ್


ನ ಸಸಾರ ಜನಕದ  ಅಂಶದೊಡನೆ ಸೇರಿ  ಗ್ಲೈಕೊಸಿಲೇಟೆಡ್ ಹಿಮೊಗ್ಲೋಬಿನ್  ಉಂಟಾಗುತ್ತದೆ.          ಇದರ


ಪ್ರಮಾಣವನ್ನು  ಅಳೆಯ ಬಹುದು .ಮತ್ತು  ಅದು  ಎರಡರಿಂದ  ನಾಲ್ಕು ವಾರದ ಸರಾಸರಿ  ರ ಕ್ತದ  ಸಕ್ಕರೆಯ


ಅಂಶವನ್ನು ವಿಶ್ವಸನೀಯ ವಾಗಿ  ಹೇಳುತ್ತದೆ.


ಇದನ್ನು  ಹಿಮೊಗ್ಲೋಬಿನ್ ನ  ಶೇಕಡಾ ಇ೦ತಿಸ್ಟು ಎಂದು  ರಿಪೋರ್ಟ್ ಮಾಡುತ್ತಾರೆ.


HBA1C    ಪ್ರಮಾಣ  ೬.೫% ಗಿಂತ  ಜಾಸ್ತಿ ಇದ್ದರೆ  ಸಕ್ಕರೆ ಕಾಯಿಲೆ  ಇದೆ ಎಂದು  ಹೇಳುತ್ತಾರೆ.ಇದನ್ನು  ಖಾಲಿ


ಹೊಟ್ಟೆಗೆ  ಮಾಡ ಬೇಕೆಂದು ಇಲ್ಲ. ಸಕ್ಕರೆ  ಕಾಯಿಲೆ ಇರುವವರಲ್ಲಿ  ಇದು  ೭% ಗಿಂತ  ಕಡಿಮೆ ಇರುವಂತೆ  ವೈದ್ಯರು


ಚಿಕಿತ್ಸೆ  ನೀಡುತ್ತಾರೆ.


ಕೆಲವು ರೋಗಿಗಳು  ವೈದ್ಯರಲ್ಲಿ  ಪರಿಶೀಲನೆ ಗೆ  ಹೋಗುವ೦ದಿನ  ಹಿಂದಿನ ಎರಡು ದಿನ ಸರಿಯಾಗಿ  ಪಥ್ಯ  ಮಾಡುತ್ತಾರೆ.


ಉಳಿದ ದಿನಗಳಲ್ಲಿ  ಪಥ್ಯಕ್ಕೆ  ಸ್ವಲ್ಪ ವಿರಾಮ .ಅಂತಹವರ  ರಕ್ತದ  ಗ್ಲುಕೋಸ್ ಟೆಸ್ಟ್ ಮಾಡಿದರೆ  ನಾರ್ಮಲ್ ಇರುತ್ತದೆ


ಆದರೆ  ಗ್ಲೈಕೊಸಿಲೇಟೆಡ್ ಹಿಮೊಗ್ಲೋಬಿನ್ ಟೆಸ್ಟ್ ನಲ್ಲಿ ಅವರು ತಪ್ಪಿಸಿ  ಕೊಳ್ಳಲಾರರು.ಏಕೆಂದರೆ  ಅದು  ವಾರಗಳ



ಸರಾಸರಿ  ಪ್ರಮಾಣ ನೀಡುತ್ತದೆ.ಸಕ್ಕರೆ ಪ್ರಮಾಣ  ನಿರಂತರ  ಹತೋಟಿಯಲ್ಲಿ ಇದ್ದರೆ  ಮೂತ್ರ ಪಿಂಡ ,ಕಣ್ಣು ,ಹೃದಯ


ಮತ್ತು ಮೆದುಳಿಗೆ  ಆಗುವ  ಹಾನಿ  ತಡೆಗಟ್ಟ  ಬಹುದು.


ಎಚ್ ಬಿ ಎ ೧ ಸಿ  ಪ್ರಮಾಣ ವನ್ನು  ರಕ್ತದ  ಗ್ಲುಕೋಸ್ ಗೆ  ಪರಿವರ್ರ್ತಿಸುವ   ಕೋಸ್ಟಕ  ಕೆಳಗಿದೆ.






ಮಂಗಳವಾರ, ಮೇ 21, 2013

ವೇದ ಮೂರ್ತಿ ದಿ . ಅಮೈ ನಾರಾಯಣ ಭಟ್ರು (ಹವ್ಯಕ ಭಾಷೆ )

                                                    
 
ಪುರೋಹಿತರು   ಎಂದರೆ  ಮುಂದೆ  ನಮ್ಮ ಪರವಾಗಿ ನಿಂದು ನಡೆಸಿ ಕೊಡುವವರು ಹೇಳಿ ಅರ್ಥ .ನಮ್ಮ   ಪುರೋಹಿತರು
 
 
ಅಮೈ ಮನೆತನದವರು . ಅದರಲ್ಲೂ  ನನಗೆ  ತಟ್ಟನೆ ನೆನಪಿಗೆ ಬರುವುದು   ನಗು ಮುಖದ  ದಿ.ನಾರಾಯಣ ಭಟ್ರು. ಈ
 
ಪುರೋಹಿತರು ,ವೈದಿಕರು ದೇವ ಸೇವೆ ಮಾಡಿ ಕೊಂಡು ಇರುವ ಕಾರಣ ಅವರಿಗೆ ಶಾಂತ ಮನಸ್ಥಿತಿ ಇರ ಬೇಕು . ಶೀಘ್ರ ಕೋಪಿ
 
ಗಳಾದರೆ  ಅವು ಇನ್ನು ದೇವೆರಿಗೆ ಹತ್ತಿರ ಆಗಿಲ್ಲ ಎಂದು ಅರ್ಥ . ಕೆಲವು ದೇವಲಯಗಳಲ್ಲಿ   ದೂರ್ವಾಸ
 
ರ ಹಾಗೆ ಕೋಪಿಷ್ಟ   ಪೂಜಾರಿಗಳು ಇರುವರು . ದೂರದಿಂದ ಬಂದ  ಭಕ್ತ ಜನನ್ನು ಕಂಡರೆ  ಕೋಪದಲ್ಲಿ ಹರಿ ಹಾಯುವರು .
 
 
ದೇವರ  ಸೇವಿಸುವಗೆ  ಕ್ರೋಧ ತರವೇ ? ಅದಕ್ಕೇ ಅಂತಹ   ದೇವಸ್ಥಾನಕ್ಕೆ  ಪುರೋಹಿತರು ಬಂದ ಕೂಡಲೇ ದೇವರು
 
ಹೊರ ತೆರಳಿ ಅವರು   ಮನೆಗೆ ಹೋದ ಮೇಲೆ ಬರುವರಂತೆ .
 
ನಾರಾಯಣ ಭಟ್ರು ಯಾವಾಗಲೂ ಹಸನ್ಮುಖಿ.  ಬರುವಾಗಲೇ ನಗುವಿನ ತಂಗಾಳಿ ತರುವರು ಅವರ  ಕಂಡು ನಾಯಿ
 
ಬೊಗಳಿದರೆ  ' ಯಾನತ್ತ ನಾಯಿ ಈ ದಾಯೆ ಕೊರೆಪ್ಪುನೆ' ಎಂದು  ಜೋಕ್  ಮಾಡುವರು .  ಆ  ಮೇಲೆ  ಮದುವೆ ಸಾಮಾನು  ಪಟ್ಟಿಯಲ್ಲಿ ಮದುಮಗಳು   ಮದುಮಗನ ಹೆಸರು ಬರೆಯಲು ಬಿಟ್ಟು ಹೋಗಿದೆ ,ಅವರು ಇದ್ದಾರಲ್ಲ  ಎಂದು ನಗುವರು .
 
ಅವರಿಗೆ ನಶ್ಯ ಸೇದುವ ಆಭ್ಯಾಸ ಇತ್ತು.' ಇಂದು ವಿಟ್ಲ ಪೇಟೆಯ ಹೊಡಿ ತೆಗೆದೆ 'ಎಂದು ಹೇಳಿ ಪನ್ ಮಾಡುವರು . ಸರ್ವಿಸ್
 
ಕಾರಿನಲ್ಲಿ   ಉಪ್ಪಿನ ಕಾಯಿ ಹಾಕಿದ ಹಾಂಗೆ ಜನ ಹಾಕುವರು . ಸ್ವಲ್ಪ ಹೊತ್ತು ಕಳೆದಾಗ ಮರಗಟ್ಟಿ ನಮ್ಮ ಕಾಲು  ಯಾವದು ಇನ್ನೊಬ್ಬರದ್ದು ಯಾವದು ಎಂದು ತಿಳಿಯುವುದಿಲ್ಲ . ಒಮ್ಮೆ   ಕಾಲು  ತುರಿಸುತ್ತದೆ ಎಂದು ತುರಿಸಿದ್ದು ಪಕ್ಕದವರ   ಕಾಲು ಆಗಿತ್ತು ಮಹಾರಾಯರೇ  ಎಂದು ನಗೆಯಾಡುವರು .'  
ಇನ್ನು ಅವರ  ಕೆಲವು  ಮಾತುಗಳು ಹವ್ಯಕ ಭಾಷೆಯಲ್ಲಿಯೇ ಬರೆಯುವೆನು
 
'ಕುಡಿವಲೆ ಕಾಪಿಯೋ  ಚಾವೋ ಹೇಳಿ ಕೇಳಿದರೆ ಮಕ್ಕೊಗೆ  ಹೆದರಿಕೆ ಆವುತ್ತು (ಚಾವಿನ ಭಯ)
 
 ಎನಗೆ ಈಗ ಮರವದು ಜಾಸ್ತಿ , ಆನು ಕೂದ  ಮಣೆಯೇ ಮರದ್ದು .(ಪನ್)
 
ಈ ಮದುವೆಲಿ ಅಗ್ನಿ ಶಾಕ್ಷಿಗೆ ಬೇರೆ ಕಿಚ್ಚ್ಚು ಬೇಡ  ಇಷ್ಟು ಒಳ್ಳೆ ಪೊದು ಸಿಕ್ಕಿತ್ತನ್ನೆ ಹೇಳಿ ಕೆಲವರ  ಹೊಟ್ಟೆ ಕಿಚ್ಚು ಇಕ್ಕು ಅದು ಸಾಕು .
 
ಎನ್ನ ಜಡೆಯ ಹಿಂದಂದ (ಅವಕ್ಕೆ ಉದ್ದ ಜಡೆ ಇತ್ತು ) ಕೆಲವು ಹೆಮ್ಮಕ್ಕ ಏನಕ್ಕ ಹೆಂಗಿದ್ದಿ  ಹೇಳಿ ,ಮೋರೆ ನೋಡಿದ
 
 
ಮೇಲೆ ಪೆಚ್ಚಾದ್ದರ  ಸ್ವಾರಸ್ಯವಾಗಿ ಹೇಳುಗು.
 
ಸುಶ್ರಾವ್ಯ ವಾಗಿ  ಮಂತ್ರ  ಹೇಳುವರು.
 
ಅವರು   ಇಂದು ಇಲ್ಲದ್ದರೂ ಅವರ  ಹಸನ್ಮುಖ  ಕಣ್ಣೆದುರು ಇದೆ.
 
 

ಶನಿವಾರ, ಮೇ 18, 2013

ಭಾಷಾ ಪ್ರಭೇದಗಳು

ನಿನ್ನೆ ಒಬ್ಬ ರೋಗಿ  ಬಂದಿದ್ದರು. ಏನು ತೊಂದರೆ ಎಂದು ಕೇಳಿದ್ದಕ್ಕೆ ಮೂರು ದಿನಗಳಿಂದ ಉರಿ ಒಂದಕ್ಕೆ  ಡಾಕ್ಟ್ರೆ ಎಂದರು.


ನನಗೆ ಸೋಜಿಗ,ಈ ಶಬ್ಧ ನಾನು ಮೊದಲ ಬಾರಿ ಕೇಳುತ್ತಿರುವುದು.ಎಲ್ಲರೂ ಉರಿ  ಮೂತ್ರ  ,ಇಲ್ಲವೇ ತುಳು ಮಲಯಾಳಂ


ನಲ್ಲಿ ಅದಕ್ಕೆ ಸಮಾನಾದ ವಾಕ್ಯ ಬಳಸುತ್ತಾರೆ. ನಾನು ಮೆಡಿಕಲ್ ಓದಿದ್ದು ಹುಬ್ಬಳ್ಳಿಯಲ್ಲಿ. ಅಲ್ಲಿ ರೋಗಿಗಳು  ಕಾಲ್ಮಡಿ


ಬೆಂಕಿ ಬೆಂಕಿ ಹತ್ದಾಂಗಿ ಉರೀತೈತರಿ ಎಂದು ಹೇಳುತ್ತಿದ್ದರು.ದಕ್ಷಿಣ ಕನ್ನಡ ಜಿಲ್ಲೆಯ ವೈಶಿಷ್ಟ್ಯವೆಂದರೆ ಇಲ್ಲಿ ಕನ್ನಡ  ಮಾತೃ


ಭಾಷೆ ಇರುವವರು ಬಹಳ ಕಮ್ಮಿ.ತುಳು, ಬ್ಯಾರಿ ಭಾಷೆ , ಹವ್ಯಕ ,ಕೋಟ  ಕನ್ನಡ ,ಮರಾಟಿ,ಕೊಂಕಣಿ  ಮಾತೃಭಾಷೆ


ಇರುವವರು  ಶಾಲೆಗಳಲ್ಲಿ ಕನ್ನಡ ಅಧ್ಯಯನ ಮಾಡುವರು. ಆದ್ದರಿಂದಲೇ ಇಲ್ಲಿಯ ಬರವಣಿಗೆಯ  ಕನ್ನಡ  ಗ್ರಾಂಥಿಕ


ವಾಗಿಯೂ ಸಂಭಾಷಣೆ ಕನ್ನಡ ಮಾತೃ ಭಾಷೆಯ ಮಿಶ್ರಣ ವೂ ಆಗಿರುವುದು. ಹೆಸರು ತಿಳಿಯಲು  ಇಲ್ಲಿ ನಿಮ್ಮ ಹೆಸರು

ಹೇಗೆ ಎಂದು ಕೇಳುವರು ,ಇದು ತುಳುವಿನ ಪುದರ್ ಇಂಚಿನ ಎಂಬುದಕ್ಕೆ  ಸರಿಯಾದ ಅನುವಾದ, ಕರ್ನಾಟಕದ


ಬೇರೆ ಭಾಗ ಗಳಲ್ಲಿ  ಹೆಸರು ಹೇಗೆ  ಎಂದರೆ  ತಮಾಷೆಗೆ  ನನ್ನ ಹೆಸರು ಹೀಗೆ ಎಂದು ಕೈ ಭಾಷೆ ಮಾಡುವರು .ಪಂಜೆ


ಕಾರಂತ ರ  ಸಾಹಿತ್ಯದಲ್ಲಿ ಕರಾವಳಿ ಕನ್ನಡದ  ಸೊಗಡು ಕಾಣ ಬಹುದು. ಪಂಜೆಯವರು ಚಿಕ್ಕಪ್ಪ ನಿಗೆ  ಚಿಕ್ಕ ತಂದೆ


ಚಿಕ್ಕಮ್ಮನಿಗೆ ಚಿಕ್ಕ ತಾಯಿ ಎಂದು ಬರೆಯುವರು. ಪ್ರಶಸ್ತಿ ವಿಜೇತ ಸಾಹಿತಿ ಶ್ರೀನಿವಾಸ ವೈದ್ಯರು ( ಮೂಲತಃ

ಧಾರವಾಡದವರು ,ಈಗ ಬೆಂಗಳೂರಲ್ಲಿ ನೆಲಸಿದ್ದಾರೆ) ತನಗೆ ಕಾರಂತರ ಕಾದಂಬರಿಗಳು ಅರ್ಥವಾಗುವುದಿಲ್ಲ


ಎಂದಿದ್ದಾರೆ. ಈ  ಪುಸ್ತಕಗಳಲ್ಲಿ ಬರುವ ಸಂಕ ದಾಟುವುದು ,ತಡಮ್ಮ್ಮೆ ಹಾರುವುದು ಇತ್ಯಾದಿ ಅವರಿಗೆ  ಗ್ರೀಕ್ ಅಂಡ್


ಲ್ಯಾಟಿನ್  .ಅದೇ ರೀತಿ  ವೈದ್ಯರ ಹಳ್ಳ ಬಂತು ಹಳ್ಳ , ರಾವ್ ಬಹಾದ್ದೂರ್ ಅವರ ಗ್ರಾಮಾಯಣ ಕರಾವಳಿ ಜನರಿಗೆ


ಕಬ್ಬಿಣದ ಕಡಲೆ ಎನಿಸೀತು.

ಒಮ್ಮೆ ಎರಡು ಸಣ್ಣ ಹುಡುಗಿಯರು ಶಾಲೆಗೆ ಹೋಗುತ್ತಾ ಮಾತನಾಡುತ್ತಿದ್ದರು .' ಇಕೊಳ್ಳ ಸಾರದ   ವಸಂತಿ ಇದ್ದಾಳಲ್ಲ

ಅವಳಿಗೆ  ನಾನು ಚಂದ ಅಂತ ಜಂಬವಾ ,ಅವಳು ಎಂತ ಚಂದವಾ  ,ಮುಸುಂಟು ನೋಡಿದರೆ  ಮುಜುವಿನ

ಹಾಗೆ ಉಂಟು ,ಅವಳಿಗೆ ಜಂಬ ಇದ್ದರೆ ಅವಳಿಗೇ ಆಯಿತಾ ಅಲ್ಲವಾ ' ನನಗೆ ಈ ಭಾಷೆ ಕೇಳಿ  ನಾವು ಸಣ್ಣವರಾಗಿದ್ದಾಗ


ಮಾತನಾಡುತ್ತಿದ್ದ  ಭಾಷೆ ನೆನಪಾಯಿತು.

 ತಮಿಲ್ನಾಡಿನಲ್ಲೂ ಚೆನ್ನೈ ತಮಿಳ್ ,ಕೋವೈ ತಮಿಳ್ ,ಮದುರೈ ತಮಿಳ್ ಎಂಬ ಪ್ರಬೇಧಗಳಿವೆ.ಕೇರಳದಲ್ಲಿ  ತಿರುವನಂತಪುರ


ತ್ರಿಶೂರ್  ಮತ್ತು ಮಲಬಾರ್ ಮಲಯಾಳ ಎಂಬ  ಪ್ರಬೇಧಗಳಿವೆ..


ಬಾಲಂಗೋಚಿ ;  ಹಾಸ್ಯ ಪ್ರಜ್ಞೆಗೆ ಹೆಸರಾಗಿದ್ದ  ಖ್ಯಾತ ಸಾಹಿತಿ ಪ್ರಾದ್ಯಾಪಕ ಎಸ್ ವಿ ಪರಮೇಶ್ವರ ಭಟ್ ಅವರ ಒಬ್ಬ

ವಿದ್ಯಾರ್ಥಿ  ತಾನು ಜಿಲ್ಲ ಪಂಚಾಯತ್ ಮತ್ತು ಶಾಸನ ಸಭೆ ಗೆ ಸ್ಪರ್ದಿಸಬೇಕೆ೦ದಿರುವೆ.ಒಂದಕ್ಕೆ ನಿಲ್ಲಲೋ ಎರಡಕ್ಕೂ

ನಿಲ್ಲಲೋ ಸರ್ ಎಂದು ಸಲಹೆ ಕೇಳಿದ್ದಕ್ಕೆ  ಭಟ್ಟರು ಥಟ್ಟನೆ ಒಂದಕ್ಕಾದ್ರೆ ನಿಲ್ಲಬಹುದು  ಎರಡಕ್ಕೆ ಕುಳಿತುಕೊಳ್ಳಲೇ ಬೇಕು

ಎಂದರಂತೆ.

ಟಿ ಪಿ ಕೈಲಾಸಂ  ಅವರ ಸಂಸ್ಕೃತ  ಅಧ್ಯಾಪಕರು  ತನ್ನ ತರಗತಿಯಲ್ಲಿ ಎಲ್ಲರೂ ಸಂಸ್ಕೃತದಲ್ಲಿ ಕಡ್ಡಾಯವಾಗಿ  ಮಾತನಾಡ

ಬೇಕು ,ಎಂದು ತಾಕೀತು ಮಾಡಿದರಂತೆ . ಆಗ ಕೈಲಾಸಂ ತಮ್ಮ ಒಂದು ಬೆರಳು ಎತ್ತಿ ಮೂತ್ರ ವಿಸರ್ಜನಾರ್ತ್ಹಾಯ

ಬಹಿರ್ದೇಶಂ ಗಚ್ಚಾಮಿ ಎಂದರಂತೆ .ಅಧ್ಯಾಪಕರು ಸಿಟ್ಟಾಗಿ ದೇವ ಭಾಷೆಯನ್ನು ಹಾಗೆಲ್ಲ ಅಪವಿತ್ರ ಮಾಡ ಬಾರದು

ಎಂದರಂತೆ

ಪ್ಲೇಟಿಲೆಟ್ ಎಂಬ ರಕ್ತ ಸ್ಥಂಭಕ


ರಕ್ತದಲ್ಲಿರುವ ಕೆಂಪು ಮತ್ತು ಬಿಳಿ ರಕ್ತ  ಕಣಗಳ ಬಗ್ಗೆ ನಾವೆಲ್ಲಾ ಕೇಳಿದ್ದೇವೆ. ಕೆಂಪು ರಕ್ತ ಕಣಗಳು  ಶ್ವಾಸಕೋಶದಿಂದ  ಆಮ್ಲ


ಜನಕ ವನ್ನು ದೇಹದ ಕಣ ಕಣ ಗಳಿಗೂ ಸಾಗಿಸುವ ವಾಹಕ ವಾದರೆ ಬಿಳಿ ರಕ್ತ ಕಣ ಗಳು  ರೋಗಾಣುಗಳನ್ನು ನಾಶ ಪಡಿಶುವ


ಸೈನಿಕರು. ಇವುಗಳೆರದೊಡನೆ ಪ್ಲಾಟಿಲೆಟ್  ಎಂಬ ಇನ್ನೊಂದು ಮುಖ್ಯ ರಕ್ತ ಕಣ ಎಲೆಯ ಮರೆಯ ಕಾಯಿಯಂತೆ ಇದ್ದು


ರಕ್ತ ಸ್ರಾವ ದಿಂದ ನಮ್ಮನ್ನು ಕಾಯುತ್ತದೆ.

                                               

ಮೇಲಿನ ಚಿತ್ರದಲ್ಲಿ ನೀಲಿ ಚುಕ್ಕೆಗಳಂತೆ ಕಾಣುವ ಕಣಗಳೇ ಪ್ಲಾಟಿಲೆಟ್ ಅಥವಾ ತ್ರೋ೦ಬೋಸೈಟ್ಗಳು .ಎಲ್ಲಿಯಾದರೂ ಸಣ್ಣ 



ಗಾಯ ವಾದೊಡನೆ  ಈ ಕಣ ಗಳು   ಸ್ಥಳಕ್ಕೆ ತೆರಳಿ  ಉದ್ದಾಲಕ ನ೦ತೆ ರಕ್ತನಾಳದಲ್ಲಿ ಆದ ರಂದ್ರ ವನ್ನು ಮುಚ್ಚಲು 


ಶ್ರಮಿಸುತ್ತವೆ .ಮುಂದೆ ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಗೆ ಅನುವು ಮಾಡಿಕೊಟ್ಟು ರಕ್ತಸ್ರಾವ ತಡೆಯವಲ್ಲಿ ಪ್ರಮುಖ 


ಪಾತ್ರ ವಹಿಸುತ್ತವೆ. ನಾವು ಬಹಳ ಮಂದಿ ಈ ಕಣಗಳ ಬಗ್ಗೆ ಕೇಳಿಯೇ ಇಲ್ಲ


ಇತ್ತೀಚಿಗೆ  ಡೆಂಗು ಜ್ವರದ ವ್ಯಾಪಕ ಹಾವಳಿಯಿಂದ ಈ ಕಣಗಳೂ ಸ್ವಲ್ಪ ಪ್ರಸಿದ್ದ್ದಿ ಗೆ ಬಂದಿವೆ .ಈ ಜ್ವರದಲ್ಲಿ  



ಪ್ಲಾಟಿಲೆಟ್ ಕಣಗಳು ಗಣನೀಯವಾಗಿ  ಇಳಿಕೆಯಾಗುತ್ತವೆ.ತಮ್ಮನ್ನು ಪ್ರಸಿದ್ದಿಗೆ ತಂದ ಈ ಜ್ವರಕ್ಕೆ ಪ್ಲಾಟಿ ಲೆಟ್ ಗಳು ಚಿರ ಋಣಿ 

ಗಳಾಗಿರಬೇಕು . ಸಾಮಾನ್ಯವಾಗಿ  ಒಂದು ಘನ ಮಿಲಿ ಲೀಟರ್ ರಕ್ತ 


ದಲ್ಲಿ  ೧೫೦೦೦೦ ದಿಂದ  ೪೫೦೦೦೦ ರ ಷ್ಟು ಈ  ಕಣಗಳ ಸಂಖ್ಯೆ ಇರುತ್ತದೆ. ಇದು  ೫೦೦೦ ಕ್ಕಿಂತ  ಕಮ್ಮಿಯಾದರೆ 


ಯಾವುದೇ  ಪ್ರಚೋದನೆಯಿಲ್ಲದೆ ರಕ್ತ ಸ್ರಾವ ವಾಗುವುದು . ಆದರೆ ಬಹುತೇಕ  ಡೆಂಗು ಜ್ವರ ರೋಗಿಗಳಲ್ಲಿ  ಈ ಕಣಗಳ  


ಸಂಖ್ಯೆ ಒಮ್ಮೆ ಕಮ್ಮಿಯಾದರೂ   ತಾನೇ ಸರಿಯಾಗುವುದು .ವಿಶ್ವ ಆರೋಗ್ಯ ಸಂಸ್ಥೆ ಡೆಂಗು ಜ್ವರದಲ್ಲಿ  ಮುಂಗಾಮಿ ಯಾಗಿ 


 ಪ್ಲಾಟಿಲೆಟ್ ಕೊಡುವಂತೆ ಶಿಫಾರಸ್ ಮಾಡಿಲ್ಲ . 


ಈ ಕಾರಣವಲ್ಲದೆ  ಹಲವು ಔಷಧಿಗಳ ಅಡ್ಡ ಪರಿಣಾಮ ದಿಂದ . ಇನ್ನು ಹಲವು ವೈರಲ್ ಜ್ವರಗಳಲ್ಲಿ  ಮತ್ತು 


ಸ್ವಯಂ ವಿರೋಧಿ (ಅಟೋ ಇಮ್ಯೂನ್) ಕಾರಣ ಗಳಿಂದ  ಈ ಕಣಗಳ ಕೊರತೆ ಕಾಣಿಸ ಬಹುದು.



ಇಸ್ಟೆಲ್ಲಾ  ಪ್ಲಾಟಿ ಲೆಟ್ ಗಳ ಗುಣ ಗಾನ ದ ನಂತರ ಅವುಗಳ  ನ್ಯೂನತೆಗಳನ್ನೂ ಹೇಳದಿದ್ದರೆ ನನ್ನನ್ನು  ಪಕ್ಷಪಾತಿ ಎಂದು 


ಹಳಿದೀರಿ . ಈ ಕಣಗಳ ಅಧಿಕ ಪ್ರಸಂಗ ತನ ದಿಂದ  ಹೃದಯ ದ  ರಕ್ತ ನಾಳ ಗಳಲ್ಲಿ  ಅನಾವಶ್ಯಕ  ರಕ್ತ  ಹೆಪ್ಪು ಗಟ್ಟಿ 



ಹೃದಯಾಘಾತ ಉಂಟಾಗ ಬಹುದು .ಅದಕ್ಕೆಂದೇ ಹೃದಯ ಕಾಯಿಲೆ ಇರುವವರಿಗೆ  ಪ್ಲಾಟಿ ಲೆಟ್  ವಿರೋಧಿ  ಔಷಧಿಗಳಾದ


ಆಸ್ಪಿರಿನ್  ,ಕ್ಲೋಪಿಡೋಗ್ರೆಲ್ ಗಳನ್ನು ಕೊಡುವರು .ಯಾವುದೂ ಅತಿಯಾದರೆ ರೋಗವಲ್ಲವೇ?

ಸೋಮವಾರ, ಮೇ 13, 2013

ಸ್ಟ್ರಾಂಗ್ ಔಷಧಿ

 

DRUGS DRUGS2

 

ಬಹಳ ರೋಗಿಗಳು ನನ್ನಲ್ಲಿ  ಸ್ಟ್ರಾಂಗ್ ಮಾತ್ರೆ ಕೊಡಬೇಡಿ ದಾಕ್ತ್ರೆ ,ನನಗೆ ಉಷ್ಣ ಆಗುತ್ತದೆ ಎನ್ನುತ್ತಾರೆ .ಈ ಸ್ಟ್ರಾಂಗ್ ಎಂಬುದು

 

ಒಬ್ಬೊಬ್ಬರ ದೃಷ್ಟಿಯಲ್ಲಿ ಒಂದೊಂದು ಆಗಿರುತ್ತದೆ. ಕೆಲವು ನಂಬಿಕೆಗಳು ಮತ್ತು ಅವುಗಳ ಸತ್ಯಾಸತ್ಯತೆ ವಿಶ್ಲೇಷಿಸೋಣ

 

೧. ತಿಂದಾಗ ಹೊಟ್ಟೆ ಉರಿ ಉಂಟಾದರೆ ಅದು ಸ್ಟ್ರಾಂಗ್. ಇದು ಸತ್ಯಕ್ಕೆ ದೂರ .ಜಠರ ದಲ್ಲಿ  ಆಮ್ಲ ಅಧಿಕ ಮಾಡುವಂತಹ ಮತ್ತು

 

ಪ್ರತ್ಯಾಮ್ಲಗಳನ್ನು ಕಡಿಮೆ ಮಾಡುವ ಔಷಧಗಳು ಹೊಟ್ಟೆ ಉರಿ ಉಂಟು ಮಾಡುತ್ತವೆ .ಉದಾ ಆಸ್ಪಿರಿನ್. ದೈಕ್ಲೊಫೆನಕ್ ನಂತಹ

 

ನೋವು ನಿವಾರಕಗಳು .ಇವು ರೋಗ ನಿವಾರಣೆಗೆ ಅವಶ್ಯವಿದ್ದರೆ ತೆಗೆದುಕೊಳ್ಳಲೇ ಬೇಕು.ಬಹುತೇಕ ಹೃದಯ ಸಂಬಂಧಿ

 

ಕಾಯಿಲೆಗಳಲ್ಲಿ ಆಸ್ಪಿರಿನ್ ಅನಿವಾರ್ಯ .

 

೨. ಮಾತ್ರೆಯಲ್ಲಿರುವ ಔಷಧದ  ತೂಕದ ಮೇಲೆ ಅದರ ಬಲ ನಿರ್ದರಿಸುವುದು ತಪ್ಪು.ಉದಾಹಹರಣೆ ಸಕ್ಕರೆ ಕಾಯಿಲೆಗೆ

 

ಉಪಯೋಗಿಸುವ  ಮೆಟ್ಫಾರ್ಮಿನ್ (ಗ್ಲಿಸಿ ಫೇಜ್) ೫೦೦ ಮಿಲ್ಲಿ ಗ್ರಾಂ ಔಷಧಿ ಯು  ಅದೇ ರೋಗಕ್ಕೆ ಉಪಯೋಗಿಸುವ

 

ಗ್ಲಿಬೆನ್ಕ್ಲಮೈದ್ (ದಯೋನಿಲ್) ೫ ಮಿಲ್ಲಿ ಗ್ರಾಂ ಔಷಧಿಗಿಂತ ಎಸ್ಟೋ ಕಮ್ಮಿ  ಶಕ್ತಿಯದು.ಅಲ್ಲದೆ  ಮೆಟ್ ಫಾರ್ಮಿನ್ ನ

 

ಗಾತ್ರ ವೂ ದೊಡ್ಡದು. ಆದುದರಿಂದ  ದೊಡ್ಡ ಗಾತ್ರದ ಮಾತ್ರೆಗಳು ಹೆಚ್ಚು ಸ್ಟ್ರಾಂಗ್ ಎಂಬ ನಂಬಿಕೆಯೂ ತಪ್ಪು.

 

೩.ಇದೇ ರೀತಿ ಔಷಧಿಯ ದರ ಅಧಿಕವಿದ್ದರೆ  ಅದು ಸ್ಟ್ರಾಂಗ್ ಎಂದು ಕೆಲವರು ಭಾವಿಸುತ್ತಾರೆ. ಇದು ಕೂಡ

 

ವಾಡಿಕೆಯಲ್ಲಿ  ಇರುವ ತಪ್ಪು ಕಲ್ಪನೆ.

 

೪ ಕೆಲವು  ಮಾತ್ರೆಗಳು  ಮಲ ಬಧ್ಧತೆ ಉಂಟು ಮಾಡುತ್ತವೆ .ಉದಾ  ಸಾಮಾನ್ಯ ಆಮ್ಲ ಹಾರಕ (antacid) ಮಾತ್ರೆಗಳು

 

ಮಲ ಬದ್ದತೆ ಉಂಟು ಮಾಡುತ್ತವೆ .ಎಂದೊಡನೆ ಅವು ಸ್ಟ್ರಾಂಗ್ ಎನ್ನುವುದು ಸರಿಯಲ್ಲ.

 

೫. ಅಸ್ಥಮಾ ಕಾಯಿಲೆಗೆ  ಇನ್ಹೇಲರ್ (inhalor) ಎಂಬ ಶ್ವಾಶ ಕೋಶಕ್ಕೆ ನೇರ ಸೇವಿಸುವ  ಔಷಧಿ ಕೊಡುತ್ತಾರೆ. ಬಹಳ

 

ಮಂದಿ ಇದು ತುಂಬಾ ಸ್ಟ್ರಾಂಗ್ .ಒಮ್ಮೆ  ಈ ತರಹದ ಔಷಧಿ ಸೇವಿಸಿದರೆ ಮತ್ತೆ ಯಾವಾಗಲೂ ಅದು ಬೇಕಾಗುವುದು

 

ಎಂದು ತಿಳಿದಿರುತ್ತಾರೆ.ಆದರೆ ಇವುಗಳಲ್ಲಿ ಇರುವ ಔಷಧಿ ಮೈಕ್ರೋ ಗ್ರಾಂ( ಅಂದರೆ ಮಿಲ್ಲಿ ಗ್ರಾಂನ  ಸಾವಿರದ ಒಂದನೇ

 

ಭಾಗ.) ಅಸ್ಥಮಾ ದ ತಿನ್ನುವ ಮಾತ್ರೆಗಳಲ್ಲಿ ಔಷಧಿ ಮಿಲ್ಲಿ ಗ್ರಾಂ ಗಳಲ್ಲಿ ಇರುತ್ತದೆ.ಆದುದರಿಂದ  ಇನ್ ಹೇಲರ್ ಗಳು

 

ಮಾತ್ರೆ ಗಳಿಂದ ಕಡಿಮೆ ಸ್ಟ್ರಾಂಗ್ ಎಂದಾಯಿತಲ್ಲವೇ.?

 

ಔಷಧಿಯಲ್ಲಿ ಸ್ಟ್ರಾಂಗ್ ವೀಕ್ ಎಂದು ಇಲ್ಲ .ಆಯಾಯ ರೋಗಕ್ಕೆ ವೈಜ್ಞಾನಿಕವಾಗಿ ನಿರ್ಧಾರಿತವಾದ ಮದ್ದು ಮತ್ತ್ತು ಅದರ

 

ಡೋಸ್ ಇರುತ್ತದೆ. ವೈದ್ಯರ ಸಲಹೆ ಮೇರೆಗೆ ಅದನ್ನು ತೆಗೆದು ಕೊಳ್ಳ ಬೇಕು .ಅದರಂತೆ ನನಗೊಂದು ಸ್ಟ್ರಾಂಗ್ ಡೋಸ್

 

ಮದ್ದು ಕೊಡಿ .ಒಂದೇ ದಿನದಲ್ಲಿ ಗುಣ ಆಗ ಬೇಕೆಂದು ಕೇಳುವುದೂ ತರವಲ್ಲ.

 

ಬಾಲಂಗೋಚಿ. ;     ಸ್ವಲ್ಪ ವಾದರೂ ಅಡ್ಡ ಪರಿಣಾಮ ಇಲ್ಲ್ಲದ  ಔಷಧಿ ಇಲ್ಲ .ಒಂದು ವೇಳೆ ಇದ್ದ್ದಲ್ಲಿ  ಅದಕ್ಕೆ ಪರಿಣಾಮವೂ ಇಲ್ಲ.

 

ಇಂಜೆಕ್ಷನ್  ಮಾತ್ರೆ ಗಳಿಂದ ಹೆಚ್ಚು ಸ್ಟ್ರಾಂಗ್ ಅಲ್ಲ .ಆದರೆ ಕೆಲವೊಂದು ಔಷಧಗಳು ಬೇಗನೆ ರಕ್ತ ಸೇರಿ ಪರಿಣಾಮ ಉಂಟು ಮಾಡಲು

 

ಇಂಜೆಕ್ಷನ್ ಆವಶ್ಯ.

 

(ಚಿತ್ರಗಳ  ಮೂಲಗಳಿಗೆ  ಅಭಾರಿ)

ಶನಿವಾರ, ಮೇ 11, 2013

ಮರೆಯಲಾಗದ ಮಹನೀಯರು -- ನ್ಯಾಯಮೂರ್ತಿ ಎಚ್ ಆರ್ ಖನ್ನಾ

         ಮರೆಯಲಾಗದ ಮಹನೀಯರು -- ನ್ಯಾಯಮೂರ್ತಿ ಎಚ್ ಆರ್ ಖನ್ನಾ                                        
                                                         
 
"ಅತೃಪ್ತಿಕರ, ಬಲಹೀನ   ಮತ್ತು ಸಾಮಾನ್ಯ ಜನತೆಯ ವಿಶ್ವಾಸ ಹೊಂದಿರದ ನ್ಯಾಯಾಂಗ  ವ್ಯವಸ್ಥೆ  ಹೊಂದಿರುವ ದೇಶವು ಪ್ರಗತಿಪರ ಮತ್ತು ಸಂತುಷ್ಟ ಆಗಿರಲು ಸಾಧ್ಯವಿಲ್ಲ "ಇದು ಪ್ರಜಾಪ್ರಭುತ್ವದದ ತಾಯ್ನೆಲ ಇಂಗ್ಲೆಂಡ್ ದೇಶದ ಬುದ್ದಿಜೀವಿಯ ಮಾತಲ್ಲ .ರಾಜಸತ್ತೆ ಇದ್ದ  ಮೈಸೂರು ದಿವಾನರಾಗಿದ್ದ ಸರ್   ಮಿರ್ಜಾ ಇಸ್ಮಾಯಿಲ್ ಅವರ ಜೀವನ ಚರಿತ್ರೆ "ಮೈ ಪಬ್ಲಿಕ್ ಲೈಫ್ "ಯಿಂದ ಆಯ್ದ ವಾಕ್ಯಗಳು . 

೩.೭.೧೯೧೨-೨೫.೨.೨೦೦೮

'ಒಬ್ಬ ವ್ಯಕ್ತಿಯ ಶ್ರೇಷ್ಟತೆ  ಸವಾಲುಗಳು ಮತ್ತು  ವಿವಾದಗಳನ್ನು ಎದುರಿಸುವಾಗ ಅವನ ನಡೆ  ಹೇಗಿರುತ್ತದೆ 

ಎಂಬುದನ್ನು ಆದರಿಸಿ  ಇರುತ್ತದೆಯೇ ವಿನಹ ಅನುಕೂಲ  ವಾತಾವರಣದಲ್ಲಿ ಇರುವಾಗಿನ ಪ್ರತಿಕ್ರಿಯೆಯನ್ನು 

ಆಧರಿಸಿ ಅಲ್ಲ 'ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ರವರ ಈ ಮಾತುಗಳನ್ನು ಖ್ಯಾತ ನ್ಯಾಯವಾದಿ 

ಫಾಲಿ ಎಸ್ ನಾರಿಮನ್ ಅವರು ತಮ್ಮ ಜೀವನ ಚರಿತ್ರೆ  ಬಿಫೋರ್ ದಿ ಮೆಮೊರಿ ಫೇಡ್ಸ ನಲ್ಲಿ  ನ್ಯಾಯಮೂರ್ತಿ 

ಎಚ್ ಆರ್ ಖನ್ನಾ ಬಗ್ಗೆ ಬರೆಯುತ್ತ ಉದ್ದರಿಸಿದ್ದಾರೆ .ಇದನ್ನೇ ಸಂಸ್ಕೃತದಲ್ಲಿ  ವಿಪಧಿ ಧೈರ್ಯಂ  ಅಭ್ಯುಧಯೇ 


ಕ್ಷಮಾ ಎಂದು ಮಹಾತ್ಮರ ಗುಣ  ವಿವರಿಸಿರುವುದು. ಸ್ವಾತಂತ್ರ್ಯೋತ್ತರ  ಭಾರತ  ನ್ಯಾಯಾಂಗ  ಇತಿಹಾಸದಲ್ಲಿ 


ಅತಿ  ವಂದನೀಯ ಹೆಸರು  ನ್ಯಾ,ಮೂ, ಖನ್ನಾ ಅವರದು .


ಪ್ರಸಿದ್ದ್ದವಾದ  ಕೇಶವಾನಂದ ಭಾರತಿ  ವರ್ಸಸ್  ಸ್ಟೇಟ್ ಆಫ್ ಕೇರಳ  ಕೇಸ್ ನಲ್ಲಿ  ಸಂವಿಧಾನದ 


ಮೂಲಭೂತ  ಆಶಯಗಳಿಗೆ ಕುಂದು ಬರುವ ರೀತಿಯಲ್ಲಿ  ಅದನ್ನು ತಿದ್ದುಪಡಿ ಮಾಡುವ  ಅಧಿಕಾರ

ಪಾರ್ಲಿಮೆಂಟ್ ಗೆ ಇಲ್ಲ  ಎಂಬ ಮಹತ್ವದ ತೀರ್ಪು ನೀಡಿದ ಬಹುಮತ  ಬೆಂಚ್ ನ  ಮುಖ್ಯ  ಅಂಗ 

ವಾಗಿದ್ದವರು. ತುರ್ತು ಪರಿಸ್ಥಿತಿ  ಸಮಯದಲ್ಲಿ  ಎ ಡಿ ಎಂ ಜಬಲ್ಪುರ್ ವರ್ಸಸ್  ಶುಕ್ಲ  ಕೇಸ್ ಎಂದು 

ಪ್ರಸಿದ್ದ ವಾದ  ಕೇಸ್ ನಲ್ಲಿ  ಇವರು  ವ್ಯಕ್ತಿ ಸ್ವಾತಂತ್ರವನ್ನು ಎತ್ತಿ ಹಿಡಿದು  ಭಿನ್ನಮತದ  ತೀರ್ಪು ಕೊಟ್ಟ 

ಏಕೈಕ  ನ್ಯಾಯಾಧೀಶರು. ಈ ತೀರ್ಪಿನಿಂದಾಗಿ  ಅವರು  ಇಂದಿರಾ ಗಾಂಧಿಯವರ  ಅವ ಕೃಪೆ ಗೊಳಗಾಗಿ 


ಮುಖ್ಯ ನ್ಯಾಯಾಧೀಶ  ಹುದ್ದೆ  ನೇಮಕಾತಿಯಲ್ಲಿ  ಸೇವಾಹಿರಿತನವಿದ್ದರೂ ಕಡೆಗಣಿಸಲ್ಪಟ್ಟು ತಮ್ಮ 

ಹುದ್ದೆಗೆ  ರಾಜಿನಾಮೆ ಕೊಡುವಂತಾಯಿತು. 'ಜೀವ ಮತ್ತು  ಸ್ವಾತಂತ್ರ್ಯ ಮನುಷ್ಯನ  ಹುಟ್ಟಿನಿಂದಲೇ 

ಬಂದುದು ಅದನ್ನು ಸಂವಿದಾನ ಕೊಡಮಾಡಿದ್ದಲ್ಲ, ಆದ್ದರಿಂದ ಸರಕಾರಕ್ಕೆ  ಅವುಗಳನ್ನು 

ಅತಿಕ್ರಮಿಸುವ ಹಕ್ಕಿಲ್ಲ ಎಂಬ  ವಾಕ್ಯ ಅವರ ತೀರ್ಪಿನಲ್ಲಿ ಇತ್ತು .ಈ  ಕೇಸಿನಲ್ಲಿ  ನ್ಯಾ ಮೂ ಖನ್ನಾ 

ಅಟಾರ್ನಿ ಜನರಲ್ ನಿರೇನ್ ಡೇ ಅವರಲ್ಲಿ  'ಒಂದೊಮ್ಮೆ ಅಧಿಕಾರಿಯು ವ್ಯಕ್ತಿಯೊಬ್ಬನನ್ನು 

ನಿರಪರಾಧಿಯಗಿದ್ದರೂ  ವ್ಯಕ್ತಿಗತ  ದ್ವೇಷದಿಂದ ಬಂದಿಸಿ ,ಅವನ ಜೀವಕ್ಕೇ ಸಂಚಕಾರ ತಂದರೂ 

ನ್ಯಾಯಾಲಯದಲ್ಲಿ  ಪ್ರಶ್ನಿಸುವಂತಿಲ್ಲವೆ ?  "  ಎಂದು ಕೇಳಿದ್ದಕ್ಕೆ  ಡೇ ಅವರು 'ಇದು ನನ್ನ ನಿಮ್ಮ ಆತ್ಮಸಾಕ್ಷಿಯನ್ನು 

ವಿಚಲಿತ ಮಾಡಬಹುದು ಆದರೆ ತುರ್ತುಪರಿಸ್ಥಿತಿಯಲ್ಲಿ  ಅದಕ್ಕೆ ಅವಕಾಶವಿಲ್ಲ.' ಎಂದರು.


ಈ ಕೇಸಿನಲ್ಲಿ  ಮುಖ್ಯ ನ್ಯಾ.ಮೂ ಎ ಏನ್ ರೇ (ಇವರು ಕೂಡ ಸರಕಾರದ ಕೃಪೆಯಿಂದ    ತಮಗಿಂತ ಹಿರಿಯರನ್ನು  ಹಿಂದಿಕ್ಕ್ಕಿ 


ಮುಖ್ಯ ನ್ಯಾಯಾಧಿಶರಾದವರು.).ನ್ಯಾ ಮೂ, ಚಂದ್ರಚೂಡ.ನ್ಯಾ ಮೂ ಭಗವತಿ ,ನ್ಯಾ ಮೂ  ಎಂ ಎಹ್ ಬೇಗ್ 

ಸರಕಾರದ  ಪರ ಬಹುಮತದ ತೀರ್ಪು ನೀಡಿದರೆ  ಖನ್ನಾ ಒಬ್ಬರೇ  ವ್ಯತಿರಿಕ್ತ ತೀರ್ಪು ಕೊಟ್ಟವರು. ಎಮರ್ಜೆನ್ಸಿಯ 



 ಸಮಯದಲ್ಲಿ   ತಮ್ಮ ಭಡ್ತಿಯ  ಅವಕಾಶವನ್ನು ಪಣೆಯಿತ್ತು  ವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಎತ್ತಿ ಹಿಡಿದ ಧೀಮಂತ .


ಇವುಗಳ  ಬಗ್ಗೆ  ಹೆಚ್ಚಿನ  ಮಾಹಿತಿ  ನಾರಿಮನ್ ಅವರ ಮೇಲೆ ಉಲ್ಲೇಖಿಸಿದ  ಜೀವನ ಚರಿತ್ರೆ ಮತ್ತು ನ್ಯಾ ಮೂ 

 ಲೀಲಾ ಸೇಥ್ ಅವರ ಜೀವನ ಚರಿತ್ರೆ  ಆನ್ ಬ್ಯಾಲೆನ್ಸ್ ನಲ್ಲಿ ಓದ ಬಹುದು.


ತನಗೆ  ಇಂದಿರಾಗಾಂಧಿ ಅನ್ಯಾಯ ಮಾಡಿದರೂ  ಮುಂದೆ  ಆಕೆಯ ಸದಸ್ಯತ್ವವನ್ನು ಲೋಕಸಭೆ  ಹಕ್ಕು  ಚ್ಯುತಿ ಗಾಗಿ 

ಮಾಡಿದಾಗ  ಇದೊಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಎಂದು  ಆಗಿನ  ಪ್ರಧಾನಿ  ಮೊರಾರ್ಜಿ ದೇಸಾಯಿ ಅವರನ್ನು 


ಸ್ವತಹ ಬೇಟಿ ಮಾಡಿ  ಪ್ರತಿಭಟನೆ  ಸಲ್ಲಿಸಿದ  ಮಹಾನುಭಾವ  ಇವರು. ಇವರ ಜೀವನ  ಚರಿತ್ರೆ   ನೀದರ್ ರೋಸಸ್ ನೋರ್ 

ತ್ಹೊರ್ನ್ಸ್ ಎಲ್ಲರೂ ಓದ ಬೇಕಾದ ಪುಸ್ತಕ .




ಶನಿವಾರ, ಮೇ 4, 2013

ಮರೆಯಲಾಗದ ಮಹನೀಯರು-ತ್ರಿಭುವನ ದಾಸ್ ಕಿಷಿ ಭಾಯಿ ಪಟೇಲ್

                                                

                                                          (೨೨.೧೦.೧೯೦೩ -೩.೬.೧೯೯೪)

ಮಹಾತ್ಮ ಗಾಂಧೀ ಮತ್ತು ಸರ್ದಾರ್ ಪಟೇಲ್ ಅವರಿ೦ದ ಪ್ರಭಾವಿತನಾಗಿ  ಸ್ವಾತಂತ್ರ್ಯ ಹೋರಾಟದಲ್ಲಿ  ಸಕ್ರಿಯವಾಗಿ


ತೊಡಗಿಸಿ ಕೊಂಡವರು.ಸಹಕಾರಿ ಚಳುವಳಿಯಲ್ಲಿ ಮುಂಚೂಣಿಯಲ್ಲಿ ಇದ್ದವರು. ಹಾಲು ಉತ್ಪಾದಕ ರೈತರನ್ನು


ಮಧ್ಯವರ್ತಿಗಳು ಶೋಷಣೆ ಮಾಡುವುದನ್ನು ಕಂಡು ೧೯೪೬ರಲ್ಲಿ ಖೇರಾ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ


ಸಂಘ ಆರಂಬಿಸಿದರು.ಇದರ ಸುಪರ್ದಿಯಲ್ಲಿಯೇ ಮುಂದೆ ಅಮುಲ್  ಸಂಸ್ಥೆ  ಆರ೦ಭವಾಯಿತು ಮತ್ತ್ತು ದೇಶದಲ್ಲಿ

ಬಿಳಿ(ಕ್ಷೀರ) ಕ್ರಾಂತಿಗೆ  ನಾಂದಿ  ಹಾಡಿತು. ಈಯೆಲ್ಲಾ ಕಾರ್ಯದಲ್ಲಿ ರಾಮನಿಗೆ ಹನುಮಂತ ಇದ್ದಂತೆ  ವರ್ಗ್ಹಿಸ್ ಕುರಿಯನ್

ಇದ್ದರು.   ತರುಣ ಕುರಿಯನ್ ಅವರನ್ನು ಆನಂದಕ್ಕೆ ಕರೆಸಿ ಅವರೆಲ್ಲಾ  ಕನಸು ಕೆಲಸಗಳಿಗೆ  ಬೆನ್ನೆಲುಬಾಗಿ  ನಿಂತವರು.


ಇವರ ಸೇವೆ ಗುರಿತಿಸಿ ನಮ್ಮ ಸರಕಾರ ಪದ್ಮ ಭೂಷಣ  ಪ್ರಶಸ್ತಿ ನೀಡಿ ಗೌರವಿದ್ದರೆ  ರೇಮನ್ ಮ್ಯಾಗಸೆಸೆ ಯಂತ

ಅಂತರ ರಾಷ್ಟ್ರೀಯ ಮನ್ನಣೆಯೂ  ಇವರಿಗೆ  ಬಂತು.


"ದೇಶ ಮತ್ತು ಸಮಾಜ ವನ್ನು ಸಣ್ಣ ಮನಸಿನ  ದೊಡ್ಡ ಮನುಷ್ಯರಿಂದ ಬಲ ಪಡಿಸಲಾಗದು ,ಬದಲಾಗಿ  ದೊಡ್ಡ ಮನಸಿನ


ಸಣ್ಣ ಮನುಷ್ಯರು ಅವನ್ನು ಸಾದಿಸ ಬಲ್ಲರು " ಇದು ಅವರ ಉವಾಚ .

ಮರೆಯಲಾಗದ ಮಹನೀಯರು -ಶ್ರೀ ಬಾಬುಭಾಯಿ ಜೆ ಪಟೇಲ್

                                 

                                              

ಖ್ಯಾತ ಲೇಖಕ ಎಸ ಎಲ್ ಭೈರಪ್ಪನವರ ಆತ್ಮ ಚರಿತ್ರೆ ಭಿತ್ತಿ ಯಲ್ಲಿ ಅವರು ಗುಜರಾತಿನ ವಲ್ಲಭ ಭಾಯಿ ಪಟೇಲ್ ವಿಶ್ವವಿದ್ಯಾನಿಲಯಕ್ಕೆ

 

ತತ್ವ ಶಾಸ್ತ್ರ ಅಧ್ಯಾಪಕರಾಗಿ ಹೋದ ಪ್ರಸ್ತಾಪ ಬರುತ್ತದೆ.ಅವರನ್ನು ಆಯ್ಕೆ ಮಾಡಿದ ಸಮಿತಿಯ ಅದ್ಯಕ್ಷರಾಗಿದ್ದವರು ನಿವೃತ್ತ  ಐ ಸಿ ಎಸಅಧಿಕಾರಿ ಮತ್ತು ಮುಂದೆ ಕೇಂದ್ರದ ಅರ್ಥ ಸಚಿವರಾದ ಎಚ್ ಎಂ ಪಟೇಲ್ ಅವರು.ಆಗ ವಿಶ್ವ ವಿದ್ಯಾನಿಲಯದ ಉಪಕುಲಪತಿಯಾಗಿದ್ದವರು  ಶ್ರೀ ಬಾಬು ಭಾಯಿ ಪಟೇಲ್ ಅವರು .ಇವರು ಗಾಂಧಿ ವಾದಿಯಾಗಿದ್ದುದಲ್ಲದೆ ಅಲ್ಲದೆ ಉತ್ತಮ ಆಢಳಿತಗಾರರು ಆಗಿದ್ದರೆಂದು ಭೈರಪ್ಪನವರು ಬರೆದಿರುವರು. ತತ್ವ್ಸ ಶಾಸ್ತ್ರ ವಿಭಾಗ ಆರಂಬಿಸಿ ಅದಕ್ಕೆ ಬೇಕಾದ ಅನುಕೂಲತೆಗಳನ್ನು ಮಾಡಿ ಕೊಟ್ಟರು ಎಂದು ನೆನಪಿಸಿಕೊಳ್ಳುತ್ತಾರೆ.ಒಮ್ಮ ಹಾಸ್ಟೆಲ್ ನ ಕೆಲವು ಹುಡುಗರು ಊಟದ ಏಕತಾನತೆಯ ಬಗ್ಗೆ ಇವರಲ್ಲಿ ಪ್ರಸ್ತಾಪಿಸಿ ರಜಾ ದಿನಗಳಲ್ಲಿ ಭೂರಿಭೋಜನ  ಕೊಡಬೇಕೆಂಬ ಬೇಡಿಕೆ ಇತ್ತರು .ಅದಕ್ಕೆ ಅವರು ಭೂರಿ ಭೋಜನ ಗಳಿಂದ ಮೆಸ್ಸ್ ಬಿಲ್ ಅಧಿಕ ವಾಗುವುದು .ಎಷ್ಟೋವಿದ್ಯಾರ್ಥಿಗಳು ಸಾಲ ಸೋಲ ಮಾಡಿ ಕಲಿಯುತ್ತಿರುತ್ತಾರೆ.ನಮ್ಮ ಪ್ರಾಚೀ ನ ಗುರುಕುಲಗಳಲ್ಲಿ ರಾಜನ ಮಗನಾಗಲೀ ,ಶ್ರೀಮಂತ

ವ್ಯಾಪಾರಿಯ ಮಗನಾಗಲೀ ,ಬಡಗಿ ಕಮ್ಮಾರ ದನಗಾಹಿಯ ಮಗನಾಗಲೀ ಎಲ್ಲರೂ ಒಂದೇ ತರಹದ ವಸ್ತ್ರ ಧರಿಸುತ್ತಿದ್ದರು.ಹತ್ತಿರದಊರಿಗೆ ಹೋಗಿ ಭವತಿ ಭಿಕ್ಷಾಂದೇಹಿ ಅಂತ ಬೇಡಿ ತರುತ್ತಿದ್ದರು .ಅವರ ಅನ್ನ ಅವರೇ ದುಡಿಯಬೇಕು.ಸಹನಾವವತು ಸಹನವ್ ಭುನಕ್ತು ಎಂದರೆ ಇದು ಅರ್ಥ.ನಮ್ಮ ಸಹಪಾತಿಗಳು ಮಾಡುವ ಊಟ ನಮಗೆ ಬೇಡ ,ಬಡಾ ಖಾನ ಬೇಕೆಂದರೆ ಏನರ್ಥ ?ಎ೦ದ ರಂತೆ.

ಒಮ್ಮೆ ಕಾಳಿದಾಸ ಜಯಂತಿಯಂದು ಅವರು ಮಾಡಿದ ಆಶು ಭಾಷಣ ಸಂಸ್ಕೃತ ವಿದ್ವಾಂಸರು ಮಾಡಿದ್ದುದಕ್ಕಿಂತಲೂ ಅಮೋಘ ವಾಗಿತ್ತುಎಂದು ಭೈರಪ್ಪ ಅಭಿಪ್ರಾಯ ಪಡುತ್ತಾರೆ.

                                        List of Chief Minister of Gujarat with Bio and Timeline - Cool Gujarati |  All about Gujarat and Gujaratis

ಮುಂದೆ ಇದೆ ಭಾಬು ಭಾಯಿ ೧೯೭೭ ರಲ್ಲಿ ಗುಜರಾತಿನ  ಮಂತ್ರಿ  ಮತ್ತು ಮುಖ್ಯ ಮಂತ್ರಿ ಗಳಾದರು. ಮಂತ್ರಿಗಳಾಗಿದ್ದಾಗ ಅವರ ವೇಷ ಭೂಷಣಸರಳ ಉಡುಪು ಕೈಯ್ಯಲ್ಲಿ ಒಂದು ಹತ್ತಿ ಬಟ್ಟೆಯ ಚೀಲ .ಅದಿಕೃತ ಪ್ರವಾಸ ವೇಳೆಯಲ್ಲಿ ಅವರುಪಯಣಿಸುತ್ತಲೇ ಊಟ ಉಪಹಾರ ಮುಗಿಸುತ್ತಿದ್ದರು .ಅದಕ್ಕಾಗಿ ಪ್ರವಾಸಿ ಬಂಗಲೆಗೆ ಹೋಗುತ್ತಿರಲಿಲ್ಲ .ಮಂತ್ರಿಯಾಗಿರುವಾಗ ತಮ್ಮ ಸಮಯ ವೆಲ್ಲ ಸಾರ್ವ ಜನಿಕರಿಗೆ ಮೀಸಲಿರಬೇಕೆಮ್ಬುದು ಅವರ ನಂಬಿಕೆ.ಇನ್ನು ಸರಕಾರಿ ವೆಚ್ಚದಲ್ಲಿ ಐಶಾರಮಿ ಹೋಟೆಲುಗಳಿಗೆ (ಈಗಿನರಾಜಕಾರಿಣಿಗಳಂತೆ) ಹೋಗುವ ಮಾತೆಲ್ಲಿ?

 ಅವರು ಮಂತ್ರಿ ಯಾಗಿದ್ದಾಗ ವಾರಕ್ಕೆ ಒಮ್ಮೆ ಅಹಮದಾಬಾದ್ ನಿಂದ ತಮ್ಮ ಊರು  ನಾನ್ದ್ಯಾದ್ ಗೆ ಸರಕಾರೀ ಬಸ್ ನಲ್ಲಿ ಬರುತಿದ್ದರು.ತಮ್ಮ ಮನೆಗಿಂತ ನಾಕು ನೂರು  ಯಾರ್ಡ್ ಮೊದಲಿನ ಬಸ್ ಸ್ಟಾಪ್ ನಲ್ಲಿ ಇಳಿದು ನಡೆಯುತ್ತಿದ್ದರು.(ಅವರ ಮನೆ ರಸ್ತೆ ಬದಿಯಲ್ಲಿ ಇದ್ದರೂ  ಎಕ್ಸ್ ಪ್ರೆಸ್ ಬಸ್ ಸ್ಟಾಪ್ ಇರಲಿಲ್ಲ ) ಬೇಕೆಂದರೆ ಡ್ರೈವರ್ ಇವರಮನೆಯ ಮುಂದೆ ನಿಲ್ಲಿಸುತ್ತಿದ್ದ. ಇದರಲ್ಲಿ ಕಷ್ಟ ವಾಗುತ್ತಿದ್ದುದು ಆ ಭಾಗದ ರೆವೆನ್ಯೂ ವಿಭಾಗದ ಮುಖ್ಯನಿಗೆ .ಸಚಿವರು ತನ್ನ ಏರಿಯಾಕ್ಕೆಬರುವಾಗ ರಾಜ ಮರ್ಯಾದೆಗಳೊಂದಿಗೆ  ಸ್ವೀಕರಿಸುವುದು ಪ್ರೋಟೋಕಾಲ್ ಅಲ್ಲವೇ? ಆದರೆ ಭಾಬು ಭಾಯಿ ನೀವು ಬರುವ ಅವಶವಿಲ್ಲ :ನಾನು ನನ್ನ ಮನೆಗೆ ಹಿಂತಿರುಗುತ್ತಿದ್ದೇನೆ ಅಷ್ಟೆ ಎಂದರಂತೆ.

 

ಮೂಲ  ೧ ಭಿತ್ತಿ  ಲೇ ಎಸ ಎಲ್ ಭೈರಪ್ಪ

          ೨ The Insiders View by Javid Choudhury

ಶುಕ್ರವಾರ, ಮೇ 3, 2013

ಒರ ಜೂಪು ----ಜನಪ್ರಿಯ ತ್ಯಾಗರಾಜ ಕೃತಿ



Lyrics

Pallavi

ōra jūpu jūcēdi nyāyamā
ō raghūttama nīvaṇṭi vāniki

Anupallavi

nīrajākṣa munu nī dāsulaku
nīkēṭi 1vāvulu telpavē (ōra)

Charanam

mānamiñcukaina nīku tōca lēkā
pōyina vainamēmi puṇya rūpamā
dīna rakṣakāśrita mānava
2santāṇa gāna lōla tyāgarāja nuta (ōra)
 
ತ್ಯಾಗರಾಜರ ಜನಪ್ರಿಯ ರಚನೆ.ಕನ್ನಡ ಗೌಳ ರಾಗದಲ್ಲಿ ಹಾಡಲ್ಪಡುತ್ತದೆ.
 
ಭಾವಾರ್ಥ ಹೀಗಿದೆ
-------------------------------------------------------------
 
ನನ್ನೆಡೆಗೇಕಿ ತಿರಸ್ಕಾರದ ನೋಟ ,ರಘು ಕುಲೋತ್ತಮ ನಿನಗಿದು ತರವೇ?
 
ಹೇ ಕಮಲಾಕ್ಷ ನಿನ್ನ ಮತ್ತು ಭಕ್ತರ ಭಾಂಧವ್ಯ ಹಿಂದೆ ಎಂತು ಇದ್ದಿತು?
 
ಸದ್ಗುಣ ಶೀಲ ನಿನ್ನ ಭಕ್ತರ ಗೌರವ ನಿನಗೆ ಗೌಣವೇ?
 
ದೀನ ರಕ್ಷಕ ,ಗಾನ ಲೋಲ  ,ತ್ಯಾಗರಾಜ ವಂದಿತ .
 
 
------------------------------------------------------------
 
ವಯೊಲಿನ್ ಮಾಂತ್ರಿಕ ಲಾಲ್ಗುಡಿಯವರು ನುಡಿಸಿದ ಈ ಗೀತೆ ಕೇಳಿ (ಅಪ್ ಲೋಡರ್ ಗೆ ವಂದಿಸುತ)
 
 
 
 
ಯುವ ಪ್ರತಿಭೆ ಸಿಕ್ಕಿಲ್ ಗುರುಚರಣ್ ಅವರ ಗಾಯನದಲ್ಲಿ ನೋಡಿ ಕೇಳಿ(ಅಪ್ ಲೋಡರ್ ಗೆ ವಂದಿಸುತ)
 

ಬಾಯಾರಿಕೆ

220px-William-Adolphe_Bouguereau_(1825-1905)_-_Thirst_(1886)
thirst
ಈಗ ಬೇಸಿಗೆ. ಎಲ್ಲೆಡೆ ತೀರದ ದಾಹ.ನಮ್ಮ ಶರೀರದಲ್ಲಿ ಉಷ್ಣತೆ ,ರಕ್ತದ ಸಾಂದ್ರತೆಗಳು  ಒಂದು ಪರಿದಿಯೊಳಗೆ ಇರಬೇಕು.  ಅದು

ಹೆಚ್ಚು ಕಮ್ಮಿಯಾದ ಒಡನೆ ದೇಹದಲ್ಲಿ ಇರುವ  ಬ್ಯುಲ್ಟ್ ಇನ್ ಸ್ತೆಬಿಲೈಸರ್ ಕೆಲಸ ಮಾಡುತ್ತವೆ.ಶರೀರದ ಉಷ್ತ್ನತೆ ಹೆಚ್ಚಾದೊಡನೆ

ಚರ್ಮದಲ್ಲಿರುವ ಬೆವರಿನ ಗ್ರಂಥಿಗಳು ಬೆವರನ್ನು ಉತ್ಪಾದಿಸಿ ಹೊರ ಹಾಕುತ್ತವೆ .ಈ ಕ್ರಿಯೆಯಲ್ಲಿ ಚರ್ಮ ತಂಪಾಗಿ  ಉಷ್ಣತೆ
ಕಂಮಿಯಾಗುವಂತೆ ಮಾಡುತ್ತದೆ.

ಆದರೆ ಈ ಕ್ರಿಯೆಯಿಂದ ಶರೀರದ ನೀರಿನ ಅಂಶ ಕಮ್ಮಿಯಾಗಿ ರಕ್ತ ದ ಸಾಂದ್ರತೆ ಹೆಚ್ಚಾಗುವುದು.ಒಡನೆ ಮೆದುಳಿನಲ್ಲಿ ಇರುವ

ಬಾಯಾರಿಕೆ ಕೇಂದ್ರ ಇದನ್ನು ಗುರುತಿಸಿ ನಿರಡಿಕೆ ಉಂಟು ಮಾಡುವುದು.ಅಲ್ಲದೆ ಮೂತ್ರ ಪಿಂಡಗಳು ತಮ್ಮದೇ ವಿಧಾನಗಳಿಂದ

ಮೂತ್ರದ ನೀರಿನ ಅಂಶವನ್ನು ಪುನಃ ಹೀರಿ ರಕ್ತಕ್ಕೆ ಸೇರಿಸಿ ತಮ್ಮ ಪಾಲಿನ ಸೇವೆ ಸಲ್ಲಿಸುತ್ತವೆ.


                ಬೇಸಿಗೆಯಲ್ಲಿ ಮದುವೆ ಸಮಾರಂಭಗಳು ಹೆಚ್ಚು.ಸೆಖೆಯಿಂದ ಬೆವರಿ ರಕ್ತದ ಸಾಂದ್ರತೆ ಹೆಚ್ಚಾಗಿರುತ್ತದೆ.ಇದರ

ಮೇಲೆ ಸಕ್ಕರೆ  ಭರಿತ ಸಿಹಿ ತಿಂಡಿ ,ಪಾಯಸ ,ಉಪ್ಪು  ಅದಿಕ ವಾಗಿರುವ ಹಪ್ಪಳ ,ವ್ಯಂಜನಗಳು ರಕ್ತಕ್ಕೆ ಉಪ್ಪು ಮತ್ತು ಶುಗರ್

ಸೇರಿಸಿ  ಸಾಂದ್ರತೆ ಹೆಚ್ಚಿಸುತ್ತವೆ.ಒಡನೆ ಮೆದುಳಿನ  ನೀರಡಿಕೆ ಕೇಂದ್ರವು (Thirst Center) ಅತೀವ ಬಾಯಾರಿಕೆ ಉಂಟು

ಮಾಡಿ ನೀರು ಸೇವಿಸಲು ಪ್ರಚೋದಿಸುತ್ತವೆ .ಬಹಳ ಮಂದಿ ಔತಣ ಊಟದ ಬೆಳ್ತಿಗೆ ಅನ್ನವನ್ನು ಈ ದಾಹಕ್ಕೆ ಕಾರಣವೆ೦ದು

ವಿನಾಕಾರಣ ದೂಶಿಸುತ್ತಾರೆ.ಅಲ್ಲದೆ ನಿರಡಿಕೆ ನೀಗಲು ನೀರೇ ಉತ್ತಮ.ಸಾಂದ್ರತೆ ಜಾಸ್ತಿ ಇರುವ ಕಬ್ಬಿಣ ಹಾಲು ,ಜ್ಯೂಸ್

ಇತ್ಯಾದಿಗಳು  ರುಚಿಯಾಗಿದ್ದರೂ  ಬಾಯಾರಿಕೆ ಯ ಮೂಲ ಉದ್ದೇಶ ಇಡೇರಿಸುವುದಿಲ್ಲ .(ಎಂದರೆ ರಕ್ತ ದ ಹೆಚ್ಚಿದ ಸಾಂದ್ರತೆಯನ್ನ್ನು

ಪುನ  ಸಂಮಾನ್ಯ ಸ್ತಿತಿಗೆ ತರುವುದು). ಸಿದ್ಧ ತಂಪು ಪಾನೀಯಗಳನ್ನು  (ಪೆಪ್ಸಿ ,ಕೋಲಾ ಇತ್ಯಾದಿ) ದೂರ ವಿರಿಸುವುದೇ ಒಳ್ಳೆಯದು .

ಎಳನೀರು ಅಂಗಡಿಯಿಂದ ಕೊಂಡು  ಕುಡಿಯುವಸ್ಟು  ಒಳ್ಳೆಯ ಅಂಶಗಳೇನೂ ಅದರಲ್ಲಿ ಇಲ್ಲ .ಮನೆಯದೆ ಆದರೆ  ಕುಡಿಯ ಬಹುದು.

ಸಾದಾರಣ ಶುಧ್ಧ ನೀರು ಅತ್ಯುತ್ತಮ .ಮಿನರಲ್ ವಾಟರ್ ಗಳ ಅವಶ್ಯವಿಲ್ಲ.

(ಚಿತ್ರಗಳ ಮೂಲಗಳಿಗೆ ಅಭಾರಿ)

ಗುರುವಾರ, ಮೇ 2, 2013

ಇಯೋಸಿನೋಫಿಲಿಯ ಎಂಬ ಇಲ್ಲದ ರೋಗ

ಬಹಳ ಮಂದಿ  ರೋಗಿಗಳು ತಮಗೆ  ಇಯೋಸಿನೋಫಿಲಿಯ ಎಂಬ ರೋಗ ಇದೆ ಎಂದು ನನ್ನೊಡನೆ

ಹೇಳುತ್ತಾರೆ.ಇಯೋಸಿನೋಫಿಲ್  ಎಂದರೆ ಬಿಳಿ ರಕ್ತ ಕಣಗಳ ಒಂದು ಪ್ರವರ್ಗ.ರಕ್ತವನ್ನು ಪರಿಶೀಲನೆ


ಗಾಗಿ  ಸ್ಲೈಡ್ ಮಾಡಿ ಅದಕ್ಕೆ ಹಿಮೆತೊಕ್ಷಿಲಿನ್  ಇಯೋಸಿನ್ ಎಂಬ ಬಣ್ಣ ಹಾಕುತ್ತಾರೆ. ನ೦ತರ


ಸೂಕ್ಸ್ಮದರ್ಶಕ ದ ಲ್ಲಿ  ನೋಡುವಾಗ  ಹೆಚ್ಚು ಗುಲಾಬಿ ಬಣ್ಣ ತೆಗೆದು ಕೊಳ್ಳುವ ಕಣಗಳನ್ನು ಇಯೋಸಿನೋಫಿಲ್

ಎಂದು ಕರೆಯುತ್ತಾರೆ.ಸಾಮಾನ್ಯವಾಗಿ ಬಿಳಿ ರಕ್ತ ಕಣಗಳ  ಶೇಕಡಾ ೪  ರಸ್ಟು ಇರುವ ಈ ಕಣಗಳು ಅಧಿಕ

ಸಂಕ್ಯೆಯಲ್ಲಿ ಇದ್ದರೆ ಇಯೋಸಿನೋಫಿಲಿಯ ಎಂದು ಕರೆಯುತ್ತಾರೆ.ಇದು ರೋಗವಲ್ಲ.ಒಂದು ವರದಿ ಮಾತ್ರ.

                          


ಸಾಮಾನ್ಯ ಶೀತ,ಅಸ್ತಮಾ ಕಾಯಿಲೆ , ಹೊಟ್ಟೆ ಹುಳದ ಭಾದೆ , ಎಲರ್ಜಿ ಇತ್ಯಾದಿ

ಸಂದರ್ಭಗಳಲ್ಲಿ ಇಯೋಸಿನೋಫಿಲ್ ಸಂಖ್ಯೆ ಅಧಿಕವಾಗುವು
ದು.ಇಲ್ಲಿ   ಈ  ಕಾಯಿಲೆಗಳಿಂದಾಗಿ


ಇಯೋಸಿನೋಫಿಲ್ಯಾವೇ  ಹೊರತಾಗಿ  ಇಯೋಸಿನೋಫಿಲ್ಗಿಯದಿಂದ  ಕಾಯಿಲೆಯಲ್ಲ.ಆದುದರಿಂದ ಮೂಲ ಕಾಯಿಲೆಗೆ


ಚಿಕಿತ್ಸೆ  ಅವಶ್ಯಕವಿದ್ದರೆ  ಮಾಡಬೇಕು. ಸಾಮಾನ್ಯ ಅಲರ್ಜಿ ,ಶೀತಗಳು ಯಾವುದೇ ಚಿಕಿತ್ಸೆಯಿಲ್ಲದೆ


ಗುಣ ವಾಗುವಂತಹವುಗಳು.